Saturday, December 29, 2012

ತೂಮಿನಾಡು:ಧ್ವಿಚಕ್ರ ವಾಹನ ಹಾಗು ರಿಕ್ಷಾ ಡಿಕ್ಕಿ:ಬೈಕ್ ಸವಾರ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು
Dec-29-2012
ಮಂಜೇಶ್ವರ:ಇಂದು ಬೆಳಿಗ್ಗೆ ಸಂಭವಿಸಿದ ಬೈಕ್ ಹಾಗು ರಿಕ್ಷಾ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿಗೆ ಸಮೀಪದ ತೂಮಿನಾಡು ಮಾಸ್ಟರ್ ಮೈಂಡ್ ನಗರದಿಂದ ವರದಿಯಾಗಿದೆ.ಗಾಯಗಳೊಂದಿಗೆ ಆಸ್ಪತ್ರೆಗೆ  ದಾಖಲಾದ ಯುವಕನನ್ನು ಮಂಗಳೂರು ಕುದ್ರೋಳಿ ನಿವಾಸಿ ಮಂಜೇಶ್ವರದಲ್ಲಿ ವ್ಯಾಪಾರಿಯಾಗಿರುವ ಸಮದ್(39) ಎಂದು ಗುರುತಿಸಲಾಗಿದೆ.ಕುಂಜತ್ತೂರಿನಿಂದ ತೂಮಿನಾಡಿಗೆ ಬರುತಿದ್ದ ಆಟೋವೊಂದು ರಾಷ್ಟ್ರೀಯ ಹೆದ್ದಾರಿಯಿಂದ ಒಳ ರಸ್ತೆಗೆ ತಿರುಗುತ್ತಿರುವಾಗ ಮಂಜೇಶ್ವರದಿಂದ ತಲಪಾಡಿ ಕಡೆ ಬರುತಿದ್ದ ಬೈಕ್ ಸವಾರ ನಿಯಂತ್ರಣ ತಪ್ಪಿ ರಿಕ್ಷಾದ ಬಲಬಾಗಕ್ಕೆ ಬಡಿದು ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ.ರಸ್ತೆ ಬದಿಯಲ್ಲಿ  ರಕ್ತದ ಮಡುವಿನಲ್ಲಿ  ಬಿದ್ದಿದ್ದ ಬೈಕ್ ಸವಾರನನ್ನು ಊರಿನವರು ಸೇರಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದರು.ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

No comments:

Post a Comment