Monday, December 31, 2012

ಮದನಿಯವರ ವಿರುದ್ದ ವಿಕೃತ ವರದಿ ಸಲ್ಲಿಸಿದ ಕರ್ನಾಟಕ ಸರಕಾರ:ಪಿಡಿಪಿ ಆರೋಪ


Dec-31-2012
ಬಂಧನ ಕ್ಕೊಳಗಾದ ಪಿಡಿಪಿ ಚೇರ್ ಮ್ಯಾನ್ ಅಬ್ದುಲ್ ನಾಸರ್ ಮದನಿಯವರ ಆರೋಗ್ಯ ಸ್ಥಿತಿ ಯ  ಬಗ್ಗೆ ಕರ್ನಾಟಕ ಸರಕಾರವು ಕೇರಳಕ್ಕೆ ಕಳಿಸಿದ ವೈಧ್ಯಕೀಯ ವರದಿ ಸತ್ಯಕ್ಕೆ ದೂರ ಹಾಗು ಅದು ಒಂದು ನಾಟಕವಾಗಿತ್ತೆಂದು ಪಿಡಿಪಿ ಕಾರ್ಯಾಧ್ಯಕ್ಷರಾದ ಪೂಂದುಲ ಸಿರಾಜ ಆರೋಪಿಸಿದರು ಅವರು ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಾ ಇದ್ದರು 
ಮದನಿಯವರಿಗೆ  ಸಮಯಕ್ಕೆ ಸರಿಯಾಗಿ ಸೂಕ್ತ ಹಾಗು ಸಕಾಲಿಕ  ಚಿಕಿತ್ಸೆ  ಲಭಿಸದೆ ಇದ್ದುದರಿಂದ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರು ಇದರಿಂದ ಗಾಬರಿಗೊಂಡ ಮದನಿಯವರ ಆರೋಗ್ಯವು ತೀರಾ ಹದೆಗೆಟ್ಟಿತು ಎಂದು ಕೂಡಾ ಅವರು ಆರೋಪಿಸಿದರು.
ಮದನಿಯವರ ವಾಸ್ತವ ಆರೋಗ್ಯ ಸ್ಥಿತಿ ಹಾಗು ಅದಕ್ಕೆ ಸಂಭಂಧಿಸಿದ ವಾಸ್ತಾವಾಂಶಗಳನ್ನು ಒಳಗೊಂಡ ಒಂದು ವರದಿಯನ್ನು ಮಾಡಿ ಈಗಾಗಲೇ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರಿಗೆ ಮನವಿ ನೀಡಲಾಗಿದೆ ಹಾಗು ಕೇರಳ ಸರಕಾರವು ಮದನಿಯವರ ಆರೋಗ್ಯ ಸ್ಥಿತಿಯ ಬಗ್ಗೆ ವಿಶೇಷ ಗಮನವಿರಿಸಿ ವೈಧ್ಯಕೀಯ ಪರೀಕ್ಷೆಗಾಗಿ ಜಾಮೀನಿನ ಮೂಲಕ ಬಿಡುಗಡೆಗೊಳಿಸಿ ಕೇರಳಕ್ಕೆ ತರಲು ಮುಖ್ಯ ಮಂತ್ರಿಯವರನ್ನು ಒತ್ತಾಯಿಸಿರುವುದಾಗಿ ಅವರು ಹೇಳಿದರು.
ಕರ್ನಾಟಕ ಸರಕಾರವು ಕಳಿಸಿದ ಮದನಿಯವರ ವೈಧ್ಯಕೀಯ ವರದಿಯನ್ನು ರಾಜ್ಯದ ಐದು ತಜ್ಞರ ತಂಡವೊಂದು ಪರಿಶೀಲಿಸಿ ಅದೇ ತಂಡ ಜನವರಿ 3 ರಂದು ಮದನಿಯವರನ್ನು ಬೇಟಿಯಾಗಲು ಬೆಂಗಳೂರಿಗೆ ತೆರಳುವುದಾಗಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ಭರವಸೆ ನೀಡಿರುವುದಾಗಿ ಪೂಂದುಲ ಸಿರಾಜ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು 

No comments:

Post a Comment