Sunday, December 30, 2012

ಮಹಿಳಾ ದೌರ್ಜನ್ಯ ತಡೆಗೆ ಹೊಸ ಕಾನೂನು :ಗೃಹ ಸಚಿವ ತಿರುವಂಜೂರು ರಾಧಾಕೃಷ್ಣನ್

Dec-30-2012

ಮಂಜೇಶ್ವರ:ದಿನದಿಂದ ದಿನಕ್ಕೆ ಹೆಚ್ಚಿತ್ತಿರುವ ಮಹಿಳಾ ದೌರ್ಜನ್ಯವನ್ನು ತಡೆಯಲು ರಾಜ್ಯದಲ್ಲಿ ಹೊಸ ಕಾನೂನನ್ನು ಜಾರಿಗೊಳಿಸುವ ಉದ್ದೇಶದಿಂದ ಕರಡು ವಿಧೇಯಕಕ್ಕೆ ಈಗಾಗಲೇ ರೂಪು ನೀಡಲಾಗಿದ್ದು ಅದರ ಪರಿಗಣನೆಗಾಗಿ ಕಾನೂನು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಗೃಹ ಖಾತೆ ಸಚಿವ ತಿರುವಂಜೂರು ರಾಧಾಕೃಷ್ಣನ್ ತಿಳಿಸಿರುತ್ತಾರೆ.
ಮುಖ್ಯ ಮಂತ್ರಿ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಕರಡು ವಿಧೇಯಕ್ಕೆ ರೂಪು ನೀಡಲು ಆಲೋಚಿಒಸಲಾಗುವುದೆಂದು ಸಚಿವರು ತಿಳಿಸಿದರು.
ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಪ್ರಕರಣಗಳ ಉನ್ನತ ತನಿಖೆಗಾಗಿ ಐ.ಜಿ.ಸಂಧ್ಯಾ ರವರ ನೇತೃತ್ವದಲ್ಲಿ ಈಗಾಗಲೇ ವಿಶೇಷ ಮಹಿಳಾ ಪೊಲೀಸ್ ತಂಡಕ್ಕೆ ರೂಪು ನೀಡಲಾಗಿದ್ದು ಅದೇ ರೀತಿ ರಾಜ್ಯದ ಪ್ರತೀ ಪೊಲೀಸ್ ಉಪ ವಿಬಾಗಗಳಲ್ಲೂ  ಇಂತಹ ಪೊಲೀಸ್ ಘಟಕಗಳಿಗೆ ರೂಪು ನೀಡಲಾಗುವುದು.ಇದು ಮಹಿಳೆಯರ ಮೇಲೆ ದೌರ್ಜನ್ಯ ಗೈಯುತ್ತಿರುವ ಆರೋಪಿಗಳಿಗೆ ಶಿಕ್ಷೆ ಖಾಯಂ ಗೊಳಿಸುವಲ್ಲಿ ಕೇರಳ ಕೂಡಾ ಮಾದರಿಯಾಗಲಿದೆ ಎಂದು ಅವರು ಹೇಳಿದರು.
ಈ ಹಿಂದೆ ಮಹಿಳೆಯರ ಮೇಲೆ ಎಷ್ಟೇ ದೌರ್ಜನ್ಯ  ನಡೆದರೂ ಹಿಂದೇಟು ಹಾಕುತಿದ್ದ ಮಹಿಳೆಯರು ಈಗ ಯಾವುದೇ ಅಂಜಿಕೆ ಇಲ್ಲದೆ ಮುಂದಾಗುತಾ ಇರುವುದು ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವೆಂದು ಸಚಿವರು ತಿಳಿಸಿದ್ದಾರೆ. 
ಮಂಜೇಶ್ವರ ಭಾಗದಲ್ಲಿ ಮಹಿಳೆಯರ ಮೇಲೆ ಏನಾದರೂ ದೌರ್ಜನ್ಯ ದ ದೂರುಗಳಿದ್ದರೆ 1091 ನಂಬ್ರಕ್ಕೆ ಕರೆದು ಮಾಹಿತಿ ನೀಡಿದರೆ ಪೊಲೀಸ್ ಸೇವೆ ಲಭಿಸಲಿದೆ ಕಾಸರಗೋಡಿನಲ್ಲಿ ಸ್ಥಾಪಿಸಲಾಗಿರುವ ಈ ವನಿತಾ ಹೆಲ್ಪ್ ಲೈನ್ ಸೌಕರ್ಯ 24 ತಾಸುಗಳಲ್ಲಿಯೂ ಕಾರ್ಯವೆಸಗುತ್ತಿದೆ. 

No comments:

Post a Comment