Saturday, December 29, 2012

ಮಂಜೆಶ್ವರ :ಕಾರಿನ ಚಕ್ರ ಕಳ್ಳರ ಹಾವಳಿ


Dec-29-2012
ಮಂಜೇಶ್ವರ:ರಾತ್ರಿ ಸಮಯಗಳಲ್ಲಿ  ಮಂಜೇಶ್ವರ,ಕುಂಜತ್ತೂರು,ತೂಮಿನಾಡು ಪ್ರದೇಶಗಳಲ್ಲಿ  ಕಾರಿನ ಚಕ್ರ ಕದಿಯುವ ಕಳ್ಳರ ಹಾವಳಿ ಹೆಚ್ಚಾಗುತಿದ್ದು ರಾತ್ರಿ ಸಮಯದಲ್ಲಿ ಮನೆ ಮುಂದೆ ನಿಲ್ಲಿಸಲಾಗುತ್ತಿರುವ ಕಾರುಗಳ ಚಕ್ರಗಳು ಬೆಳಿಗ್ಗೆ ನೋಡುವಾಗ ಮಾಯವಾಗಿರುತ್ತದೆ.ಇದರಿಂದಾಗಿ ಈ ಪ್ರದೇಶಗಳಲ್ಲಿ ವಾಸಿಸುವ ಜನರು ಕಳ್ಳರ ಈ ಉಪಟಳದಿಂದ ಭಯ ಭೀತಿಯಿಂದ ಜೀವನ ಸಾಗಿಸುವಂತಾಗಿದೆ.
ಕೇವಲ ಕಾರಿನ ಚಕ್ರವನ್ನೇ  ಕಳ್ಳತನ ಮಾಡುತ್ತಿರುವ  ಈ ಕಳ್ಳರು ರಾತ್ರಿ  ಎಲ್ಲರೂ ಗಾಢವಾದ ನಿದ್ರೆಯಲ್ಲಿರುವ ಸಮಯದಲ್ಲಿ ಈ ಕೃತ್ಯವನ್ನು ನಡೆಸಿ ಹೋಗುತ್ತಾರೆ.ಇದರ ಒಂದು ಜಾಲವೇ ತೂಮಿನಾಡು,  ಕುಂಜತ್ತೂರು ಪ್ರದೇಶಗಳಲ್ಲಿ ಸುತ್ತಾಡುತ್ತಾ ಇದೆ ಎಂಬುದಾಗಿ ನಾಗರಿಕರಿಂದ ಕೇಳಿ ಬಂದಿದೆ.
ಕಳೆದ ರಾತ್ರಿ ತೂಮಿನಾಡು ಮಾಸ್ತರ್ ಮೈಂಡ್ ನಗರದ  ವಸತಿ ಗೃಹದ  ಮುಂದೆ ನಿಲ್ಲಿಸಲಾಗಿದ್ದ ಆಲ್ಟೋ ಕಾರು ಕೆ.ಎಲ್  14-ಜಿ.8562 ನಂಬ್ರದ ಕಾರಿನ ಚಕ್ರವನ್ನು ಕದಿಯಲು ಬಂದ ಕಳ್ಳರು ಹತ್ತಿರದ ಬಾಡಿಗೆ ಮನೆಯಲ್ಲಿ ವಾಸವಾಗಿದ ಉತ್ತರ ಪ್ರದೇಶದ ಐಸ್ ಕೇಂಡಿ ವ್ಯಾಪಾರಿಗಳ ಆರ್ಭಟದಿಂದ  ಅರ್ಧದಲ್ಲಿ ಬಿಟ್ಟು ಹೋದ ಘಟನೆ ನಡೆದಿದೆ.ಕಾರೊಂದರಲ್ಲಿ ಆಗಮಿಸಿದ್ದ ಕಳ್ಳರ ತಂಡದಲ್ಲಿ ಇಬ್ಬರಿದ್ದರೆಂದು ಹೇಳಲಾಗಿದೆ.ಮನೆಯ ಎದುರುಗಡೆ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಕಾರಿನ ಚಕ್ರವನ್ನು ಕದಿಯಲು ಬಂದ  ಕಳ್ಳರನ್ನು ಪತ್ತೆಹಚ್ಚಬಹುದಾದಂತಹ  ಕುರುಹುಗಳು ಸಿಕ್ಕಿರುವುದಾಗಿ ಕಾರು ಮಾಲಕರಿಂದ ತಿಳಿದು ಬಂದಿದೆ.ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಕೆಲವು ದಿನಗಳ ಹಿಂದೆ ಉದ್ಯಾವರ 10 ನೇ ಮೈಲಿನಲ್ಲಿ ರಸ್ತೆ ಬದಿಯಲ್ಲಿರುವ ಹನೀಫ್ ಎಂಬವರ ಕಾರಿನ ಹಿಂಬಾಗದ  ಎರಡೂ ಚಕ್ರಗಳನ್ನೂ ಕಳವು ಗೈಯಲಾಗಿದೆ.ಕೆಲವು ಕಡೆಗಳಲ್ಲಿ ಒಂದು ಚಕ್ರಗಳನ್ನು ತೆಗೆದು ಮತ್ತೊಂದು ಚಕ್ರವನ್ನು ತೆಗೆಯಲು ಸಾಧ್ಯವಾಗದೆ  ಅರ್ಧದಲ್ಲಿ ಹೋದ ಘಟನೆಯೂ ಕೂಡಾ ನಡೆದಿದೆ. ಈ ಪ್ರದೇಶಗಳ ಹಲವು ಕಡೆಗಳಲ್ಲಿ ಈ ಕೃತ್ಯಗಳನ್ನು  ನಡೆಸುವ ತಂಡ ಎಲ್ಲವೂ ಒಂದೇ ಆಗಿರುವುದಾಗಿ ನಾಗರಿಕರು ಶಂಶಯವನ್ನು ವ್ಯಕ್ತ ಪಡಿಸಿದ್ದಾರೆ.

No comments:

Post a Comment