Monday, December 31, 2012

ಬಂದಿಯೋಡ್ :ಬೈಕ್ ಸವಾರನ ಮೇಲೆ ಟೆಂಪೋ ಹರಿದು ಸ್ಥಳದಲ್ಲೇ ಮೃತ್ಯು


Dec-31-2012
ಮಂಜೇಶ್ವರ:ಚಲಿಸುತಿದ್ದ ಬೈಕ್ ಗೆ ಹಿಂದಿನಿಂದ ಬಂದ ಬೈಕೊಂದು ಗುದ್ದಿ  ರಸ್ತೆಗೆಸೆಯಲ್ಪಟ್ಟ  ಬೈಕ್ ಸವಾರನ ಎದೆಯ ಮೇಲೆ ಟೆಂಪೋ ಒಂದು ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಇಲ್ಲಿಗೆ ಸಮೀಪದ ಬಂದಿಯೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತ ಪಟ್ಟ ಯುವಕ ಬಂದಿಯೋಡ್ ಅಡ್ಕ  ಕಲ್ಲಾಪು ನಿವಾಸಿ ಮಹಮ್ಮದ್ ಹನೀಶ್(19) ಎಂಬವನಾಗಿದ್ದಾನೆ. ಇಂದು ರಾತ್ರಿ ಅಣ್ಣನ ಅಂಗಡಿಯಿಂದ ಕೆಲಸ ಮುಗಿಸಿ ಮನೆಗೆ ತನ್ನ ಬೈಕ್ ನಲ್ಲಿ ಹಿಂತಿರುಗುತಿದ್ದ ವೇಳೆ ಹಿಂದಿನಿಂದ ಬಂದ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮಹಮ್ಮದ್ ಹನೀಶ್ ಮೇಲೆ ಎದುರಿನಿಂದ ಬಂದ ಟೆಂಪೋ ಎದೆಯ ಮೇಲೆ ಹರಿದು ಸಾವು ಸಂಭವಿಸಿದೆ.ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

No comments:

Post a Comment