Sunday, December 30, 2012

ಜನಾಕ್ರೋಶಕ್ಕೆ ಬೆದರಿ ಜಂತರ್-ಮಂತರ್‌ನಿಂದ ಶೀಲಾ ಹಿಂದಕ್ಕೆ


ಜನಾಕ್ರೋಶಕ್ಕೆ ಬೆದರಿ ಜಂತರ್-ಮಂತರ್‌ನಿಂದ ಶೀಲಾ ಹಿಂದಕ್ಕೆ
 ಡಿಸೆಂಬರ್-30-2012

ಹೊಸದಿಲ್ಲಿ: ದಿಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ನಿಧನಕ್ಕೆ ಸಂತಾಪ ಸೂಚಿಸಲು ಜಂತರ್ ಮಂತರ್‌ಗೆ ಹೋಗಿದ್ದ ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಹೋದಂತೆ ಮರಳ ಬೇಕಾಗಿ ಬಂದ ಘಟನೆ ಇಂದು ನಡೆದಿದೆ.
ಸಂತ್ರಸ್ತೆಯ ಸಾವಿಗೆ ಸಂತಾಪ ಸೂಚಿಸುವುದಕ್ಕಾಗಿ ಇಂದು ಅಪರಾಹ್ಣ 2ರ ವೇಳೆ ಜಂತರ್ ಮಂತರ್‌ನ ಬಳಿ ಸುಮಾರು 500ರಷ್ಟು ಮಂದಿ ಸೇರಿದ್ದರು. ಅಲ್ಲಿಗೆ ದೀಕ್ಷಿತ್ ತಲುಪಿದಾಗ ಅವರನ್ನು ಸುತ್ತುವರಿದ ಆಕ್ರೋಶಿತ ಪ್ರತಿಭಟನಕಾರರು ಅವರನ್ನು ಹಿಂದಿರುಗುವಂತೆ ಆಗ್ರಹಿಸಿದರು.

ದೀಕ್ಷಿತ್ ಹಾಗೂ ಪೊಲೀಸರು ಜನರನ್ನು ಸಮಾಧಾನಪಡಿಸಲು ಯತ್ನಿಸಿ, ಅವರಿಗೆ ಸಂತಾಪ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ವಿನಂತಿಸಿದರು. ಆದರೆ ಉದ್ರಿಕ್ತ ಪ್ರತಿಭಟನಕಾರರು ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.
ಆದಾಗ್ಯೂ, ಜಂತರ್ ಮಂತರ್‌ನಿಂದ ಹಿಂದಿರುಗುವ ಮೊದಲು ಮೇಣದ ಬತ್ತಿಯೊಂದನ್ನು ಉರಿಸಿದ ದೀಕ್ಷಿತ್, ಆಗಲಿದ ಆತ್ಮಕ್ಕೆ ಶಾಂತಿ ಕೋರಿದರು.
ಯುವತಿಯ ಸಾವಿಗೆ ಸಂತಾಪ ಸೂಚಿಸಲು ತಾನು ಜಂತರ್‌ಮಂತರ್‌ಗೆ ಹೋಗಿದ್ದೇನೆಂದು ಅವರು ಬಳಿಕ ಪತ್ರಕರ್ತರಿಗೆ ತಿಳಿಸಿದರು.
ನೀವು ಒಬ್ಬಳ ಸಾವನ್ನು ರಾಜಕೀಯಗೊಳಿಸಲು ಬಯಸುತ್ತೀರಾ? ಪ್ರತಿಭಟನೆ ಆರಂಭಗೊಂಡಾಗ ಅವರೇಕೆ ಬರಲಿಲ್ಲ? ದೀಕ್ಷಿತರ ನಿವಾಸದೆದುರು ಪ್ರತಿಭಟನೆ ನಡೆಸಿದ್ದ ವೇಳೆ, ತಮ್ಮನ್ನು ಅಲ್ಲಿಂದ ಅಟ್ಟುವಂತೆ ಅವರು ಪೊಲೀಸರಿಗೆ ಆದೇಶಿಸಿದ್ದರು‘ ಎಂದು ಪ್ರತಿಭಟನೆಕಾರನೊಬ್ಬ ಖಾರವಾಗಿ ಪ್ರತಿಕ್ರಿಯಿಸಿದ

No comments:

Post a Comment