Monday, December 31, 2012

ಮದನಿ ಮಾನವ ಹಕ್ಕು ಸಮಾವೇಶ
Dec-31-2012
ಮಂಜೇಶ್ವರ:ಬೆಂಗಳೂರು ಪರಪ್ಪನ ಅಗ್ರಹಾರ ದ ಜೈಲಿನಲ್ಲಿ ವಿಚಾರಣಾಧೀನ ಕೈಧಿಯಾಗಿ ಸೆರೆಮನೆ ವಾಸ ಅನುಭವಿಸುತ್ತಿರುವ ಅಬ್ದುಲ್ ನಾಸರ್ ಮದನಿ ಯವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗು ಅವರಿಗೆ ಜಾಮೀನು ನೀಡಿ ವಿಚಾರಣೆ ತ್ವರಿತಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಅನ್ವಾರ್ ವೆಲ್ಫೇರ್ ಅಶೋಶಿಯೇಶನ್ ಹಾಗು ಮುಸ್ಲಿಂ ಸಂಯುಕ್ತ ವೇದಿ ಯ ಸಹ ಪ್ರಾಯೋಜಕತ್ವದಲ್ಲಿ ಇಂದು  ಉದ್ಯಾವರ ಶಹೀದ್ ಇರಾಕ್ ಸದ್ದಾಂ ಹುಸೇನ್ ನಗರದಲ್ಲಿ ಮಾನವ ಹಕ್ಕು ಸಮಾವೇಶ ನಡೆಯಿತು .ಉದ್ಘಾಟನೆಯನ್ನು ಕರ್ನಾಟಕ  ಜೆಡಿಎಸ್ ಮುಖಂಡ ದೇವಿ ಪ್ರಸಾದ್ ಶೆಟ್ಟಿ ನೆರವೇರಿಸಿದರು ಹಾಗು ಮಹರಾಷ್ಟ್ರದ ಪ್ರಮುಖ ವಿಧ್ವಾಂಸ ಮೌಲಾನ ಶೇಕ್ ಹಝರತ್ ಸಾದಿಕ ಮುಬಲ್ಲಿಗ್ ಮುಖ್ಯ ಪ್ರಭಾಷನ ಗೈದರು .ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ ಈ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು

No comments:

Post a Comment