ಮಂಜೇಶ್ವರ ಟೈಮ್ಸ್
ನಿಮಗೆ ಇಷ್ಟವಾಯಿತೇ

ಹಾಗಾದರೆ, ನಿಮ್ಮ ಸ್ನೇಹಿತರಿಗೂ ಒಂದು ಮಾತು ತಿಳಿಸಲು ಮರೆಯಬೇಡಿ.......

ಆಗಲೇ ನಮ್ಮ ಈ ಪರಿಶ್ರಮ ಸಾರ್ಥಕ !!!

Friday 24 February 2012

‘ಅದೃಶ್ಯ ಶಕ್ತಿ’ ಒಲಿಸಲಿಕ್ಕಾಗಿ 10 ವರ್ಷದ ಬಾಲಕನ ರುಂಡವನ್ನು ಚೆಂಡಾಡಿದ ಮಾಂತ್ರಿಕ

2012 ಮಂಜೇಶ್ವರ್ ಟೈಮ್ಸ್

ರಾಯ್‌ಪುರ್: ಛತ್ತೀಸ್‌ಗಢದಲ್ಲಿ ‘ಅದೃಶ್ಯ ಶಕ್ತಿ’ಯನ್ನು ಪಡೆಯುವ ದುರುದ್ದೇಶದಿಂದ ಇಲ್ಲಿನ ಮಾಂತ್ರಿಕನೊಬ್ಬ 10ರ ಹರೆಯದ ಬಾಲಕನೊಬ್ಬನ ತಲೆ ಕತ್ತರಿಸಿ, ಹತ್ಯೆಗೈದ ಆಘಾತಕಾರಿ ಘಟನೆ ವರದಿಯಾಗಿದೆ ಎಂದು ಇಂದು ಪೊಲೀಸರು ಹೇಳಿದ್ದಾರೆ.

ಫೆಬ್ರವರಿ 5ರಿಂದ ನಾಪತ್ತೆಯಾಗಿರುವ ಪ್ರವೀಣ್ ಎಂಬಾತನ ಸಾವಿಗೆ ಸಂಬಂಧಿಸಿ ದಿಲೀಪ್ ರಥಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಾಯ್‌ಗಢ ಜಿಲ್ಲೆಯ ಪುಂಜಿಪಾಥ್ರದಲ್ಲಿ ಬಾಲಕನ ಶವ ಫೆಬ್ರವರಿ 20ರಂದು ಪತ್ತೆಯಾಗಿದ್ದು, ಹತ್ಯೆಗೆ ಸಂಬಂಧಿಸಿ ರಥಿಯಾನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೇಹಾ ಪಾಂಡೆ ತಿಳಿಸಿದ್ದಾರೆ.

ಹತ್ಯೆಗೆ ಬಳಸಲಾದ ಖಡ್ಗವೊಂದನ್ನು ವಶಕ್ಕೆ ತೆಗೆದುಕೊಳ್ಳಲಾದೆ. ಆರೋಪಿ ಮತ್ತು ಮೃತ ಬಾಲಕ ಬಾರ್ಪಳಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಛತ್ತೀಸ್‌ಗಢದ ತೀರಾ ಹಿಂದುಳಿದ ಪ್ರದೇಶವಿದಾಗಿದ್ದು, ಇಲ್ಲಿ ‘ಬಲಿ’ ನೀಡುವ ನಂಬಿಕೆ ಇನ್ನೂ ಜೀವಂತವಿದೆ.

ಕಳೆದ ಡಿಸೆಂಬರ್‌ನಲ್ಲಿ ಇಲ್ಲಿನ ಬಿಜಾಪುರ್‌ನಲ್ಲಿ ಏಳು ವರ್ಷದ ಬಾಲಕಿಯೊಬ್ಬಳನ್ನು ಇಬ್ಬರು ವ್ಯಕ್ತಿಗಳು ಬಲಿ ನೀಡಿದ್ದುದು ವರದಿಯಾಗಿತ್ತು. ಉತ್ತಮ ಬೆಳೆಯನ್ನು ಪಡೆಯುವ ಉದ್ದೇಶದಿಂದ ಅವರು ಈ ಬಲಿ ನೀಡಿದ್ದರು ಎಂದು ಹೇಳಲಾಗಿತ್ತು.

0 comments:

Post a Comment